ತಿಳಿಆಕಾಶದ ಬೆಳ್ಳನೆ ಚಂದ್ರಮ
ನಿನ್ನ ನಗೆಯ ಹಾಗೆ
ತೆಳು ಮೇಲುದ ಸವಿಸೊಬಗಿನ ನೇವರ
ಈ ತಂಗಾಳಿ ನಡಿಗೆ
ಸಂಧ್ಯಾಕಾಶದ ಕೆಂಪು ಭಿತ್ತಿಯಲಿ
ಬೆಳ್ಳಿ ಮೂಡಿದ ಹಾಗೆ
ನಿನ್ನಾಗಮನವು ನನ್ನ ಬದುಕಿನಲಿ
ಜೀವಜ್ಯೋತಿ ಬೆಳಗೆ
ಎಲ್ಲಿ ಮಿಂಚಿದರೂ ವಿದ್ಯುಲ್ಲತೆಯದು
ನಿನ್ನ ನೆನಪೆ ನನಗೆ
ಕಣ್ಣ ಮುಚ್ಚಿದರೂ ಕಂಪು ತೀಡಿದರೆ
ತುಂಬುವೆ ನೀನೆ ಎದೆಗೆ
ಬಳಕುವ ಬಳ್ಳಿಗೆ ಅರಳಿದ ಹೂವಿಗೆ
ಉಪಮೆ ನಿನ್ನಸೊಬಗೆ
ಮಧುಕಲಕಂಠದ ಕೋಗಿಲೆ ಇಂಪಿಗೆ
ನಮ್ಮಬೇಟವೆ ಒಸಗೆ
-ಜೈಕುಮಾರ್ ಮರಿಯಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ